ಮುಕುಂದರಾಜ
 	12ನೆಯ ಶತಮಾನ ಮರಾಠೀ ಕವಿ. ಕೆಲವರು ಇವನನ್ನು ಆದಿಕವಿಯೆಂದೇ ಹೇಳಿರುವರು. ವೇದ, ವೇದಾಂಗ, ಉಪನಿಷತ್ತುಗಳು. ಶಂಕರಾಚಾರ್ಯರ ಕೃತಿಗಳು ಇವನ್ನು ಸಂಸ್ಕøತವನ್ನರಿಯದ ಮಂದಬುದ್ಧಿಯವರಿಗೆ ತಿಳಿಯಲೆಂದು ಮರಾಠೀಭಾಷೆಗಳಿಸಿದವ. ಈತನ ಸ್ಥಳ, ಕಾಲ ಹಾಗೂ ಕೆಲವು ಗ್ರಂಥಗಳ ಬಗ್ಗೆ ವಾದವಿವಾದಗಳಿವೆ. ಅಂಬೇ ಜೋಗಾಯಿ ಎಂಬ ಸ್ಥಳದಲ್ಲಿ ಇವನ ಸಮಾಧಿಯಿದೆ. ವಿವೇಕ ಸಿಂಧುವೇ ಈತನ ಶ್ರೇಷ್ಠ ಕೃತಿ. ಪರಮಾಮೃತ, ಮೂಲಸ್ತಂಭ, ಪಂಚೀಕರಣ ಇವು ಈತನ ಇತರ ಕೃತಿಗಳು. ವಿವೇಕಸಿಂಧುವನ್ನು, ಮಹಾರಾಷ್ಟ್ರ ಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ನೃಸಿಂಹ ಬಲ್ಲಾಳನ ಪುತ್ರ ಜಯಂತಪಾಳನ ಆಜ್ಞೆಯ ಮೇರೆಗೆ ರಚಿಸಿದ. ಇದರಲ್ಲಿ ಶಂಕರಾಚಾರ್ಯರ ಅದ್ವೈತ ತತ್ತ್ವವನ್ನು ವಿವರಿಸುವುದಾಗಿ ತಿಳಿಸಿದ್ದಾನೆ. ಮಹಲಿಂಗರಂಗನ ಅನುಭವಾಮೃತ ಮತ್ತು ಚಿದಾನಂದಾವಧೂತನ ಜ್ಞಾನಸಿಂಧು ಎಂಬುದಕ್ಕೆ ಇದು ಆಕರಗ್ರಂಥ. ಮಹಲಿಂಗರಂಗ ಮುಕುಂದರಾಜನಿಂದ ಪ್ರೇರಿತನಾಗಿದ್ದಾನೆ. ಉಪನಿಷತ್ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ದೇಶಿಯಾದರೇನು? ಮರಾಠಿಯಾದರೇನು? ದೇಶೀ ಹೋಕಾ ಮರಾಠೀ 1 ಪರಿ ಉಪನಿಷದಾಚೀ ಚರಾಹಟೀ 1 ತರಿಹಾ ಅರ್ಥೂ ಜೀವಾಚಿ ಯಾ ಗಾಂಠೀ 1 ಕಾನ ಬಂಧಾವಾ|| ಎಂಬುದನ್ನೇ ಮಹಲಿಂಗರಂಗನು ಲಲಿತವಹ ಕನ್ನಡ ನುಡಿಯಲ್ಲಿ 1 ತಿಳಿದು ತನ್ನೊಳು ತನ್ನ ಮೋಕ್ಷದ 1 ಗಳಿಸಿಕೊಂಡರೆ ಸಾಲದೇ? ಸಂಸ್ಕøತದಲ್ಲಿನ್ನೇನು? ಎಂದು ಅನುವಾದಿಸಿದ್ದಾನೆ.							
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ